ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ 2017, ಈ ವಿಧೇಯಕ ಅನುಮೋದನೆ ನೀಡಬೇಕೆಂದು ಸಾರ್ವಜನಿಕರ ಮನವಿ ಪತ್ರ

ಶಾಸಕಾಂಗವು ರಾಜ್ಯದ ಜನತೆಯ ಪರ ಮತ್ತು ವೈದ್ಯಕುಲದ ಘನತೆಯನ್ನು ಉಳಿಸುವ ವೈದ್ಯರ ಪರ ನಿಲ್ಲಬೇಕೆಂದೂ, ಲಾಭಕೋರ ಲಾಬಿಗಳಿಗೆ ಮಣಿಯಬಾರದೆಂದು ಒತ್ತಾಯಿಸಿ ಮನವಿ

ಗೆ
ಮಾನ್ಯ ಶಾಸಕರು
ಕರ್ನಾಟಕ ವಿಧಾನ ಸಭೆ

ಮಾನ್ಯರೇ,

ವಿಷಯ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ 2017, ಈ ವಿಧೇಯಕ ಅನುಮೋದನೆ ನೀಡಬೇಕೆಂದು ಸಾರ್ವಜನಿಕರ ಮನವಿ ಪತ್ರ

ಮಿತಿಮೀರಿರುವ ಖಾಸಗಿ ಆಸ್ಪತ್ರೆಗಳ ಸುಲಿಗೆ ಮತ್ತು ದುರ್ನಡತೆಗಳಿಗೆ ಕಡಿವಾಣ ಹಾಕಬೇಕೆಂಬ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಬಹುದಿನಗಳ ಒತ್ತಾಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಬಂಧಪಟ್ಟ ಕಾಯಿದೆಗೆ ತಿದ್ದುಪಡಿ ತರುತ್ತಿದೆ. ಈಗಾಗಲೇ ತಮಗೆ ತಿಳಿದಿರುವಂತೆ ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ 2017’, ಈ ಮಸೂದೆ 13 ಜೂನ್ 2017 ರಂದು ವಿಧಾನ ಸಭೆಯಲ್ಲಿ ಮಂಡನೆಯಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳ ಬೆಲೆ ನಿಯಂತ್ರಣ, ರೋಗಿ ಹಕ್ಕುಗಳ ಸಂರಕ್ಷಣೆಯನ್ನು ಖಾತ್ರಿಗೊಳಿಸುವ ರೋಗಿ ಹಕ್ಕುಗಳ ಮತ್ತು ಖಾಸಗಿ ಆಸ್ಪತ್ರೆಯ ಜವಾಬ್ದಾರಿಗಳ ಸನ್ನದು, ರೋಗಿಗಳ ದೂರು ನಿವಾರಣೆಗೆ ಜಿಲ್ಲಾ ಮಟ್ಟದಲ್ಲಿ ಸಿವಿಲ್ ನ್ಯಾಯಾಲಯದ ಅಧಿಕಾರ ಹೊಂದಿರುವ ಕುಂದು ಕೊರತೆ ನಿವಾರಣಾ ಸಮಿತಿಗಳು – ಈ ಮಸೂದೆಯ ಮುಖ್ಯ ಅಂಶಗಳಾಗಿವೆ. ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆಗೆ ಮೊದಲೇ ರೋಗಿಗಳಿಂದ ಮುಂಗಡ ಹಣ ನೀಡುವಂತೆ ಒತ್ತಾಯಿಸಬಾರದು ಮತ್ತು ರೋಗಿ ಮೃತಪಟ್ಟರೆ, ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡದೆ ಹಣ ವಸೂಲಿಗಾಗಿ ಒತ್ತಾಯಿಸಬಾರದೆಂಬ ಮಾನವೀಯ ಮೌಲ್ಯಗಳನ್ನು ಹಾಗೂ ವೈದ್ಯ ವೃತ್ತಿಯ ಮೂಲ ನೈತಿಕತೆಯನ್ನು ಒಳಗೊಂಡ ಈ ವಿಧೇಯಕ ನಮ್ಮ ರಾಜ್ಯದ ಬಡವ ಹಾಗೂ ಮಧ್ಯಮ ವರ್ಗದ ರೋಗಿಗಳ ಹಿತಾಸಕ್ತಿಯನ್ನು ಕಾಪಾಡುತ್ತದೆ ಎಂದು ಆಶಿಸಲಾಗಿದೆ.

ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಸುಲಿಗೆ, ಉಲ್ಲಂಘನೆಗಳು, ‘ಕಟ್ ಮತ್ತು ಕಮಿಶನ್’ ಚಾಳಿ ಮುಂತಾದ ದುರ್ನಡತೆಗಳಿಗೆ ಕಡಿವಾಣ ಹಾಕಿ, ಖಾಸಗಿ ಆಸ್ಪತ್ರೆಗಳ ಉತ್ತರದಾಯಿತ್ವವನ್ನು ಹೆಚ್ಚಿಸುವ ಮತ್ತು ಜನಸಾಮಾನ್ಯರನ್ನು ರಕ್ಷಿಸುವ ಇಂತಹ ಮಸೂದೆ ಖಾಸಗಿ ಆಸ್ಪತ್ರೆಗಳ ಇಂದಿನ ವಿಷಮ ಸ್ಥಿತಿಯಲ್ಲಿ ತೀರಾ ಅನಿವಾರ್ಯವಾಗಿದೆ. ಆದರೆ ಎಂದಿನಂತೆ ತಮ್ಮ ದುರ್ನಡತೆ, ಸುಲಿಗೆಗಳನ್ನು ಎಗ್ಗಿಲ್ಲದೆ ಮುಂದುವರೆಸಬಯಸಿರುವ ಹಲವು ಕಾರ್ಪೊರೇಟ್ ಹಾಗೂ ಖಾಸಗಿ ಆಸ್ಪತ್ರೆಗಳು ಈ ಮಸೂದೆ ಅನುಮೋದನೆಯಾಗದಂತೆ ತಡೆಯಲು ನಾನಾ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಆದ್ದರಿಂದ ಜನಸಾಮಾನ್ಯರ ಹಿತಾಸಕ್ತಿಯನ್ನು ಕಾಪಾಡಲಿಕ್ಕಾಗಿ ಶಾಸಕರಾಗಿ ಆರಿಸಿಬಂದಿರುವ ತಾವು ಈ ಖಾಸಗಿ/ ಕಾರ್ಪೊರೇಟ್ ಲಾಬಿಗೆ ಮಣ ಯದೆ ಈ ಜನಪರ ವಿಧೇಯಕವನ್ನು ಅನುಮೋದಿಸಬೇಕೆಂದು, ಆ ಮೂಲಕ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿಹಿಡಿಯಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತಿದ್ದೇವೆ.

ಇಂತಿ ನಿಮ್ಮ ವಿಶ್ವಾಸಿಗಳು,

ಕರ್ನಾಟಕ ಜನಾರೋಗ್ಯ ಚಳುವಳಿ ಪರ್ಯಾಯ ಕಾನೂನು ವೇದಿಕೆ
ಕರ್ನಾಟಕ ಜನಶಕ್ತಿ
ಸ್ವರಾಜ್ ಅಭಿಯಾನ್
ಕರ್ನಾಟಕ ರಾಜ್ಯ ರೈತ ಸಂಘ
ಕರ್ನಾಟಕ ಸ್ಲಮ್ ಜನಾಂದೋಲನ
ಸಫಾಯಿ ಕರ್ಮಚಾರಿ ಕಾವಲು ಸಮಿತಿ
ಮಂಥನ್ ಲಾ
ದಲಿತ ಸಂಘರ್ಷ ಸಮಿತಿ
ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ
ಸಮಾನ ಶಿಕ್ಷಣಕ್ಕಾಗಿ ಜನಾಂನದೋಲನ
ನೀರಿನ ಹಕ್ಕಿನ ಆಂದೋಲನ
ಜನಾಂದೋಲನಗಳ ಮಹಾಮೈತ್ರಿ
ಸ್ವರಾಜ್ ಸಂಘಟನೆ
ಮಹಿಳಾ ಮುನ್ನಡೆ
ಸಮಾನತೆಗಾಗಿ ಜನಾಂದೋಲನ
ಸಂಗಮ
ಕರ್ನಾಟಕ ಸೆಕ್ಸ್ ವರ್ಕರ್ಸ್ ಯೂನಿಯನ್
ಗಾರ್ಮೆಂಟ್ ಆಂಡ್ ಟೆಕ್ಸ್‍ಟೈಲ್ ವರ್ಕರ್ಸ್ ಯೂನಿಯನ್
ಲಂಚ ಮುಕ್ತ ಕರ್ನಾಟಕ
ಕರ್ನಾಟಕ ರಣಧೀರ ಪಡೆ
ಸಮಾಜ ಪರಿವರ್ತನಾ ಜನಾಂದೋಲನ
ಸಂಪರ್ಕಕ್ಕಾಗಿ: 9900955778, 9880595032, 9945516267, 9900400599

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Create a free website or blog at WordPress.com.

Up ↑

Discover

A daily selection of the best content published on WordPress, collected for you by humans who love to read.

The Daily Post

The Art and Craft of Blogging

The WordPress.com Blog

The latest news on WordPress.com and the WordPress community.

%d bloggers like this: