On becoming a patient

ಮನುಕುಲಕ್ಕೆ ಮಾರಕವಾಗಿದ್ದ ಹಲವು ರೋಗಗಳನ್ನು ಆಧುನಿಕ ವೈದ್ಯಕೀಯ ಪದ್ಧತಿ ನಿಯಂತ್ರಿಸಿದೆ. ಇದರ ಜೊತೆಗೆ ರೋಗಿಗಳನ್ನು (ನನ್ನ ಅಭಿಪ್ರಾಯದಲ್ಲಿ ವ್ಯಕ್ತಿ ಎಂದು ಓದಿಕೊಳ್ಳಿ, ರೋಗಿ ಅನ್ನುವ ಪದ ವ್ಯಕ್ತಿಯನ್ನು ಸುಲಿಗೆ ಮಾಡಲು ಸೃಷ್ಟಿಸಿರುವಂತದ್ದು) ಗಿರಾಕಿಗಳಂತೆ ನೋಡುತ್ತಿದೆ. ವೈದ್ಯರು ಜೀವ ಉಳಿಸುವ ಚಿಕಿತ್ಸೆಗಿಂತ ಕೃತಕ ಗರ್ಭಧಾರಣೆ, ಕಾಸ್ಮೆಟಿಕ್ ಮತ್ತು ಪ್ಲಾಸ್ಟಿಕ್ ಸರ್ಜರಿಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ.

ವೈದ್ಯ ಶಾಸ್ತ್ರ ಅನ್ನುವುದು ರೋಗಿ (ವ್ಯಕ್ತಿ), ವೈದ್ಯ ಮತ್ತು ಔಷಧಿಯ ಸುತ್ತ ಕಟ್ಟಲ್ಪಟ್ಟಿದೆ. ಇದರ ಜೊತೆಗೆ ಔಷಧಗಳ ಮತ್ತು ಉಪಕರಣಗಳ ತಯಾರಕರು ಮತ್ತು ಮಾರಾಟಗಾರರು ಜೊತೆಗೂಡಿದ್ದಾರೆ. ಇವರೆಲ್ಲರ ಜೊತೆ ಹಣದ ಆಮಿಷಕ್ಕೆ ಒಳಗಾಗಿ ವೈದ್ಯರು ಶಾಮೀಲು ಆಗಿದ್ದಾರೆ. ಒಟ್ಟಿನಲ್ಲಿ ರೋಗಿ ಎಂದರೆ ಲಾಭ ಮಾಡುವುದಕ್ಕೆ ಇರುವ ಒಂದು ದಾರಿ ಆಗಿದೆ.

ಭಾರತದಲ್ಲಿ ವ್ಯಕ್ತಿಗಳ ದಿವಾಳಿತನಕ್ಕೆ ವೈದ್ಯಕೀಯ ವೆಚ್ಚ ಸಾಮಾನ್ಯ ಎರಡನೇ ಕಾರಣವಾಗಿದೆ. ವೈದ್ಯಕೀಯ ಕ್ಷೇತ್ರ ಇವತ್ತು ಹೆಚ್ಚು ಹಣ ಹರಿಯುವ, ಅತಿಯಾದ ಲಾಭವಿರುವ, ನಷ್ಟದ ಸಾಧ್ಯತೆ ಕಡಿಮೆ ಇರುವ ಉದ್ಯಮವಾಗಿದೆ.

ಆದ್ದರಿಂದ ಇಂತಹ ಒಂದು ಉದ್ಯಮವನ್ನು ನಿಯಂತ್ರಿಸುವುದು ಚುನಾಯಿತ ಸರ್ಕಾರದ ಕರ್ತವ್ಯ ಅಲ್ಲವೇ. ಈ ನಿಯಂತ್ರಣಕ್ಕೆ ಜಿಲ್ಲಾ ಪಂಚಾಯಿತಿಯ CEO ನೇತೃತ್ವದಲ್ಲಿ ಒಂದು ನೊಂದಣೆ ಪ್ರಾಧಿಕಾರ ಮಾಡುವುದು ಹೇಗೆ ತಪ್ಪಾಗುತ್ತದೆ ಅನ್ನುವುದನ್ನು ಖಾಸಗಿ ವೈದ್ಯರು ಜನಸಾಮಾನ್ಯರಿಗೆ ವಿವರಿಸಲಿ.
ಈ ತಿದ್ದುಪಡಿಯಲ್ಲಿ ರೋಗಿ ಹಕ್ಕುಗಳ ಸಂರಕ್ಷಣೆ, ದೂರು ನಿವಾರಣ ವ್ಯವಸ್ಥೆ, ಬೆಲೆ ನಿಯಂತ್ರಣ, ಇವುಗಳು ರೋಗಿಗಳ ಹಿತಾಸಕ್ತಿಯನ್ನು ಕಾಪಾಡುವುದಾದರೆ, ನೊಂದಣೆ ಪ್ರಾಧಿಕಾರದಲ್ಲಿ, ದೂರು ನಿವಾರಣ ಸಮಿತಿಗಳಲ್ಲಿ ಮತ್ತು ಬೆಲೆ ನಿಗದಿ ಮಾಡುವ ಉಪ ಸಮಿತಿಗಳಲ್ಲಿ ಪ್ರೈವೇಟ್ ಆಸ್ಪತ್ರೆಗಳ ಪ್ರತಿನಿಧಿಗಳನ್ನು ಸೇರಿಸಲಾಗಿದೆ, ಈ ರೀತಿ ಯಾರಿಗೂ ಮೋಸ ಇಲ್ಲ. ನಾಗರಿಕರು ಮತ್ತು ವೈದ್ಯರು ಇಬ್ಬರೂ ಇದನ್ನು ಬೆಂಬಲಿಸಬೇಕು.

ನಾಗೇಗೌಡ ಕೀಲಾರ ಶಿವಲಿಂಗಯ್ಯ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Blog at WordPress.com.

Up ↑

Discover

A daily selection of the best content published on WordPress, collected for you by humans who love to read.

The Daily Post

The Art and Craft of Blogging

The WordPress.com Blog

The latest news on WordPress.com and the WordPress community.

%d bloggers like this: